ನಂದಿ ಫಿಲ್ಮಂ ಅವಾರ್ಡ್-2023: ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
Posted date: 10 Sun, Dec 2023 09:26:15 AM
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಿನ್ನೆ ಜರುಗಿದೆ. ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಮಂಡಳಿ ನಂದಿ ಪ್ರಶಸ್ತಿ ನೀಡಿದೆ. 

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಲಾಯ್ತು.

ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ‘ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್  ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿ ಸಂಸ್ಥಾಪರಾಗಿದ್ದು, ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಆಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.

ಪ್ರಶಸ್ತಿ ಪಡೆದವರ ಪಟ್ಟಿ

1.ಬೆಸ್ಟ್ ಬಾಯೋಪಿಕ್ ಅವಾರ್ಡ್. ವಿಜಯಾನಂದ ಫಿಲ್ಮ್.
2. ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್.ಲೀಲಾವತಿ.
3.ಜೀವಮಾನ ಸಾಧನೆ ಪ್ರಶಸ್ತಿ-ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
4.ಅತ್ಯತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿ-ಗಂಧದಗುಡಿ.
5.ಬೆಸ್ಟ್ ಡೇಬ್ಯುಟ್ ಆಕ್ಟರ್ ವಿಕ್ರಮ್ ರವಿಚಂದ್ರನ್.
6.ಬೆಸ್ಟ್ ಡೇಬ್ಯುಟ್ ಆಕ್ಟ್ರೆಸ್ ರೀಷ್ಮಾ ನಾಣಯ್ಯ.
7.ಬೆಸ್ಟ್ ಕಮಿಡಿಯನ್ ರಂಗಾಯಣ ರಘು.
8.ಬೆಸ್ಟ್ ಕಾಮಿಕ್ ರೋಲ್-ಅಕ್ಟ್ರೆಸ್ ಹೇಮಾದತ್.
9.ಬೆಸ್ಟ್ ಸಪೋರ್ಟಿಂಗ್ ರೋಲ್-ವೀಣಾ ಸುಂದರ್.
10.ಬೆಸ್ಟ್ ಕ್ರಿಟಿಕ್ಸ್ ಆಕ್ಟರ್-.ಸಂಚಾರಿ ವಿಜಯ್.
11.ಅತ್ಯುತ್ತಮ ಸಂಭಾಷಣೆಕಾರ ಮಾಸ್ತಿ.
12.ಅತ್ಯುತ್ತಮ ಚಿತ್ರ.777 ಚಾರ್ಲಿ.
13.ಅತ್ಯುತ್ತಮ ನಿರ್ದೇಶಕ. ರಿಷಬ್ ಶೆಟ್ಟಿ.
14.ಅತ್ಯುತ್ತಮ ನಟ. ರಿಷಬ್ ಶೆಟ್ಟಿ.
15.ಅತ್ಯುತ್ತಮ ನಟಿ-ಸಪ್ತಮಿ ಗೌಡ
16.ಅತ್ಯುತ್ತಮ ಖಳನಟ-ಡಾಲಿ ಧನಂಜಯ್
17. ಬೆಸ್ಟ್ ಆಕ್ಟರ್ ಸಪೋರ್ಟಿಂಗ್ ರೋಲ್-ಲೂಸ್ ಮಾದ ಯೋಗಿ
18.ಬೆಸ್ಟ್ ಕ್ರಿಟಿಕ್ಸ್ ಆಕ್ಟರ್ಸ್ಸ್-ಹರಿಪ್ರಿಯಾ-ಅನುಪ್ರಭಾಕರ್
19.ಬೆಸ್ಟ್ ಪ್ರೆಸ್ ಫೋಟೋಗ್ರಾಫರ್-ಕೆ.ಎನ್.ನಾಗೇಶ್ ಕುಮಾರ್
20. ಬೆಸ್ಟ್ ಪಿಆರ್ -ನಾಗೇಂದ್ರ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed